ಸರ್ ಗಂಗನಾಥ ಝಾ(೨೫ ಡಿಸೆಂಬರ್ ೧೮೭೨ - ೯ ನವೆಂಬರ್ ೧೯೪೧) ಸಂಸ್ಕೃತ , ಭಾರತೀಯ ತತ್ವಶಾಸ್ತ್ರ ಮತ್ತು ಬೌದ್ಧ ತತ್ತ್ವಶಾಸ್ತ್ರದ ವಿದ್ವಾಂಸರಾಗಿದ್ದರು. ಇವರು ನ್ಯಾಯಶಾಸ್ತ್ರದ ಪಂಡಿತರಾಗಿದ್ದರು. == ಆರಭಿಕ ಜೀವನ == ಗಂಗನಾಥ್ ಝಾ ಬಿಹಾರದ ಮಧುಬನಿ ಜಿಲ್ಲೆಯ ಸರಿಸಾಬ್ ಪಾಹಿ ಗ್ರಾಮದ ಮೈಥಿಲ್ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರಿಗೆ ಮೊದಲು ಪರ್ಷಿಯನ್ ಲಿಪಿಯನ್ನು ಕಲಿಸಲಾಯಿತು, ನಂತರ ಅವರ ಕುಟುಂಬವು ಏಳು ವರ್ಷದವನಿದ್ದಾಗ ಬೆನಾರಸ್‌ಗೆ ಹೋದರು , ಅಲ್ಲಿ ಅವರು ಸಂಸ್ಕೃತವನ್ನು ಕಲಿತರು. ೧೮೮೦ ರಲ್ಲಿ ಅವರು ತಮ್ಮ ಸಂಬಂಧಿಕರಿದಲ್ಲಿಗೆ ಮರಳಿದರು ಮತ್ತು ಒಂದು ಆಂಗ್ಲ ಮಾಧ್ಯಮ ಶಾಲೆಗೆ ದಾಖಲಾದರು. ೧೮೮೬ ರಲ್ಲಿ, ಶಾಲಾ ಶಿಕ್ಷಣವನ್ನು ಮುಗಿಸಿದ ನಂತರ , ಹೆಚ್ಚಿನ ಅಧ್ಯಯನಕ್ಕಾಗಿ ಬನಾರಸ್‌ಗೆ ಮರಳಿದರು ಮತ್ತು ಅಲ್ಲಿನ ಸರ್ಕಾರಿ ಸಂಸ್ಕೃತ ಕಾಲೇಜಿನಲ್ಲಿ ಪ್ರವೇಶ ಪಡೆದರು. ಅವರು ೧೮೯೨ ರಲ್ಲಿ ಪ್ರಥಮ ಶ್ರೇಣಿಯೊಂದಿಗೆ ಸಂಸ್ಕೃತದಲ್ಲಿ ಎಂ.ಎ ಪದವಿಯನ್ನು ಪಡೆದರು. == ಸೇವೆ == ತನ್ನ ೨೪ ನೇ ವಯಸ್ಸಿನಲ್ಲಿ, ಅವರನ್ನು ದರ್ಭಂಗಾ ರಾಜ್ಯದ ಮಹಾರಾಜರು ಗ್ರಂಥಪಾಲಕರನ್ನಾಗಿ ನೇಮಿಸಿದರು. ೧೯೦೨ ರಲ್ಲಿ, ಅಲಹಾಬಾದ್‌ನ ಮುಯಿರ್ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ನೇಮಕಗೊಂಡರು . ಅವರು ೧೯೧೮ ರಲ್ಲಿ ಹೊರಟು ಬನಾರಸ್‌ನ ಸರ್ಕಾರಿ ಸಂಸ್ಕೃತ ಕಾಲೇಜಿನ ಮೊದಲ ಭಾರತೀಯ ಪ್ರಾಂಶುಪಾಲರಾದರು. ೧೯೨೦-೧೯೨೩ ರ ನಡುವೆ ಅವರು ಸೆಂಟ್ರಲ್ ಬ್ರಿಟಿಷ್ ಗವರ್ನಮೆಂಟ್ ನಲ್ಲಿ ಕೌನ್ಸಿಲ್ ಆಫ್ ಸ್ಟೇಟ್ ಸದಸ್ಯರಾಗಿ ಸೇವೆ ಸಲ್ಲಿಸಿದರು. ಅವರು ೧೯೨೩ -೩೨ ಅವಧಿಯಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯದ (ಪ್ರಯಾಗ್ ವಿಶ್ವವಿದ್ಯಾಲಯ) ಉಪಕುಲಪತಿಯಾಗಿದ್ದರು. ಅಲಹಾಬಾದ್ ವಿಶ್ವವಿದ್ಯಾಲಯವು ಅವರ ಗೌರವಾರ್ಥವಾಗಿ ಗಂಗನಾಥ್ ಝಾ ಹಾಸ್ಟೆಲ್ ಅನ್ನು ಸ್ಥಾಪಿಸಲಾಯಿತು. == ಗೌರವಗಳು ಮತ್ತು ಪ್ರಶಸ್ತಿಗಳು == ಡಿ. ಲಿಟ್ - ೧೯೦೦ ಮಹಾಮಹೋಪಾಧ್ಯಾಯ - ೧೯೦೧ ಸದಸ್ಯ, ಕೌನ್ಸಿಲ್ ಆಫ್ ಸ್ಟೇಟ್ (೧೯೨೦-೨೩) ಕ್ಯಾಂಪ್ಬೆಲ್ ಪದಕ, ರಾಯಲ್ ಏಷಿಯಾಟಿಕ್ ಸೊಸೈಟಿ, ಲಂಡನ್ ಗೌರವ ಸದಸ್ಯ, ರಾಯಲ್ ಏಷಿಯಾಟಿಕ್ ಸೊಸೈಟಿ, ಲಂಡನ್ ನೈಟ್ ಬ್ಯಾಚುಲರ್, ೧೯೪೧ ಜನ್ಮದಿನ ಗೌರವ ಪಟ್ಟಿ == ಸಾಹಿತ್ಯಿಕ ಸೇವೆ == ಸರ್ ಜಿ.ಎನ್ ಝಾ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ ಮತ್ತು ಅನೇಕ ಸಂಸ್ಕೃತ ಪುಸ್ತಕಗಳನ್ನು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ . === ಅನುವಾಸಿದ ಪುಸ್ತಕಗಳು === ಚಂದೋಗ್ಯೋಪನಿಷದ್, ಜಿ.ಎ ನೆಲ್ಸನ್ ಅಂಡ್ ಕೊ., ಮದ್ರಾಸ್, ೧೮೯೯. ಯೋಗ-ದರ್ಶನ, ಥಿಯೊಸಾಫಿಕಲ್ ಪಬ್ಲಿಕೇಷನ್, ಬಾಂಬೆ, ೧೯೦೭. ಗೌತಮ್ ಕಾ ನ್ಯಾಯ ಸೂತ್ರ, ಓರಿಯಂಟಲ್ ಬುಕ್ ಏಜೆನ್ಸಿ, ಪೂನಾ, ೧೯೧೩. ಪೂರ್ವ- ಮೀಮಾನ್ಸ ಶಾಸ್ತ್ರ ಆಫ್ ಜೆಮಿನಿ, ಪಾಣಿನಿ ಕಚೇರಿ, ಅಲಹಾಬಾದ್, ೧೯೧೬. ಸ್ಲೋಕಾ ವಾರ್ತಿಕಾ, ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್, ಕಲ್ಕತ್ತಾ, ೧೯೨೪. ತಂತ್ರ-ಭಾಸ, ಓರಿಯಂಟಲ್ ಬುಕ್ ಏಜೆನ್ಸಿ, ಪೂನಾ, ೧೯೨೫. ಮನುಸ್ಮೃತಿ, ಐದು ಸಂಪುಟಗಳಲ್ಲಿ, ಕಲ್ಕತ್ತಾ ವಿಶ್ವವಿದ್ಯಾಲಯ, ೧೯೨೦-೧೯೨೬. ಯೋಗ ಸರ್ ಸಂಗ್ರಾಹ್, ಓರಿಯಂಟಲ್ ಬುಕ್ ಏಜೆನ್ಸಿ, ಪೂನಾ, ೧೯೩೧. == ಬರೆದ ಪುಸ್ತಕಗಳು == ದ ಪ್ರಭಕರ್ ಸ್ಕೂಲ್ ಆಫ್ ಪೂರ್ವ-ಮೀಮಾನ್ಸ , ಅಲಹಬಾದ್ ವಿಶ್ವವಿದ್ಯಾನಿಲಯ - ೧೯೧೧ ಕವಿ ರಹಸ್ಯ, ಹಿಂದೂಸ್ತಾನ್ ಅಕಾಡೆಮಿ ಪ್ರೆಸ್, ಪ್ರಯಾಗ್. ನ್ಯಾಯಾ ಪ್ರಕಾಶ್, ನಗರಿ ಪ್ರಚಾರಿನಿ ಸಭೆ, ಬನಾರಸ್ - ೧೯೨೦. ವೈಶ್ವೇಶಿಕ್ ದರ್ಶ, ನಗರಿ ಪ್ರಚಾರಿಣಿ ಸಭಾ, ಬೆನಾರಸ್, ೧೯೨೧ . ದಿ ಫಿಲಾಸಫಿಕಲ್ ಡಿಸಿಪ್ಲಿನ್, ಕಲ್ಕತ್ತಾ ವಿಶ್ವವಿದ್ಯಾಲಯ, ೧೯೨೮ . ಸೋರ್ಸಸ್ ಆಫ್ ಹಿಂದೂ ಲಾ, ಇಂಡಿಯನ್ ಪ್ರೆಸ್, ಅಲಹಾಬಾದ್, ೧೯೩೦. ಹಿಂದೂ ವಿಧಿ ಕಾ ಸ್ರೋತಾ, ಪಾಟ್ನಾ ವಿಶ್ವವಿದ್ಯಾಲಯ, ೧೯೩೧ . ಶಂಕರ್ ವೇದಾಂತ್, ಅಲಹಾಬಾದ್ ವಿಶ್ವವಿದ್ಯಾಲಯ, ೧೯೩೯ . ಪೂರ್ವ - ಮೀಮಾನ್ಸ ಇನ್ ಇಟ್ಸ್ ಸೋರ್ಸಸ್, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ೧೯೪೨ . ಯೋಗ ದರ್ಶನ, ಥಿಯೊಸಾಫಿಕಲ್ ಸೊಸೈಟಿ, ಮದ್ರಾಸ್ . == ಶಿಷ್ಯರು == ಪ್ರೊ. ಕ್ಷೇತ್ರೇಶ ಚಂದ್ರ ಚಟೋಪಾಧ್ಯಾಯ ಡಾ.ಬಾಬುರಾಮ್ ಸಕ್ಸೇನಾ ಡಾ.ಉಮೇಶ್ ಮಿಶ್ರಾ ಡಾ. ಸಹದೇವ ಝಾ == ಉಲ್ಲೇಖಗಳು ==